Saturday, January 22, 2011

ಕಂದನಾ ಮೊದಲ ತೊದಲು ನುಡಿ


ಮಗು ಹುಟ್ಟಿದ ನಂತರ ಆ ಮುದ್ದು ಕಂದನ ಸ್ಪರ್ಶ ಕೊಡೊ ಆನಂದ ಎಲ್ಲದಕ್ಕೂ ಮಿಗಿಲಾದದ್ದು.ಆ ಮಗುವಿನ ನೋಟ ಹಾವ ಭಾವ ಕೇವಲ ತಾಯಿಗೆ ಮಾತ್ರ ಗೊತ್ತಾಗುವದು. ಏನೋ ಹೇಳಬೇಕು ಅಂತ ಪ್ರಯತ್ನ ಕೂಡ ಜೋರಾಗಿರುತ್ತೆ . ಆ ಪ್ರಯತ್ನದಿಂದ ಹೊರಡುವ ಮೊದಲ ಪದಾ ಅಮ್ಮ ಅದು ಕೇಳಲು ಕೂಡಾ ಅಷ್ಟೇ ಖುಷಿ ಆಗುತ್ತೆ. ಆದರೆ ನನ್ನ ಮಗಾ ಮೊದಲು ಅಂದಿದ್ದು ಕಾಕಾ ...... ನಂತರ ಅಮ್ಮ , ಇಲ್ಲಾ.... ಬಾಬಾ.... ಹೀಗೆ ಒಂದೊಂದೇ ಪದ ಹೇಳೋಕೆ ಪ್ರಯತ್ನ ಮಾಡಿದ. ಒಂದಷ್ಟು ಪದಗಳು ನೆರವಾಗಿದ್ದಾರೆ ಇನ್ನಷ್ಟು ನಮಗೆ ಮಾತ್ರ ಅರ್ಥವಾಗತ್ತೆ . ಅದರ ಕೆಲವು ಪದಗಳು ಹೀಗೆ ........

ಅಪ್ಪಾಜಿ, ಅಮ್ಮ, ಅಜ್ಜಿ, ಕಾಕಾ, ಅಜ್ಜ, ಆಟೋ, ಬಸ್, ಕ್ಯಾಚ್, ಕೀ, ಟೀವಿ, ಡಾಗಿ, ಚೆಡ್ಡಿ, ಅತ್ತ್ಯಾ, ಪಾಪು.

ಕೆಳಗಿನ ಪದಗಳು ಮಾತ್ರ ಬೇರೆ........
ಚಾಚಾ - ಚಹಾ
ತೈಚ - ಲೈಟ್
ಕಾ - ಕಾರು
ಗಾದಿ - ಗಾಡಿ
ಟೂ - ಟಾವೆಲ್
ಪಾತ್ - ಪ್ಯಾಂಟ್
ಅನ್ನಿ - ಅಂಗಿ
ಅತ್ತಿ - ಆಂಟಿ
ತೆತ್ತಿ - ತತ್ತಿ
ಚಾಕಿ - ಚೋಕಲೆಟ್
ಬೂಚಿ - ಬಿಸ್ಕೆಟ್
ಹಾಶ್ - ಹಾರ್ಸ(ಕುದರೆ)
ಮನಾನಾ - ಬನಾನಾ
ಬೂಶ - ಜಳಕಾ
ಆಬು - ನೀರು
ಅಚ್ಚಿ - ಚಪಾತಿ
ಮಾಮು - ಮಮ್ಮು
ಸಾಸಾ - ಸಾರು
ದುದು - ಹಾಲು
ಆ ಪಟ - ಗಾಳಿಪಟ
ಬೂತ್ - ಬೂಟ
ಆ ಈಸ ಏಲ್- ಆಲ್ ಇಸ್ ವೆಲ್

ಮತ್ತೆ ಇನ್ನೇನು ಮಾತಾಡತಾನೋ ಕಾಯ್ದು ನೋಡಬೇಕು !!

This is written by veena with little help of me.

No comments: