ಒಂದು ದಿನ ಅದೇ ರೀತಿ ಸಾಮಾನ್ಯವಾಗಿ ಆಫೀಸ್ ಹೋಗಿ ಕೆಲಸ ಮಾಡ್ತಾ ಇದ್ದೆ , ಇನ್ನೇನು ಒಂದು ಗಂಟೆ ಆಗಿತ್ತು ಊಟಕ್ಕೆ ಹೋಗಬೇಕು ಅಂತ ವಿಚಾರ ಮಾಡಿದೆ , ಆಗ ಒಮ್ಮೆಲೇ ಒಂದು ಮೇಲ್ ಬಂತು ಅದೇನು ಬೇರೆ ಯಾರದು ಆಗಿರದೆ ನಮ್ಮೆಲ್ಲ ರ ಆತ್ಮೀಯ ಎಂದು ಅನಿಸಿಕೊಂಡಿರುವ, ಎಲ್ಲರಿಗೂ ಬುದ್ದಿ ಮಾತು ಹೇಳುತ್ತಾ ಹೋಗುವ, ಹುರುಪಿನಲ್ಲಿ ಏನನ್ನಾದರೂ ಮಾತನಾಡುವ(ಸಾವಿರು ರೂಪಾಯಿಗೆ ಒಂದು ಪಾನ್ ) , ಫೋನಿನಲ್ಲಿ ತಾನೆ ಮಾತಾಡಿ ಬೇರೆವರಿಗೆ ಮಾತನಾಡಲು ಕೊಡದೆ ಇರುವ , ತಾನೇ ಎಲ್ಲವನ್ನೂ ತಿಳಿದಂತೆ ಮಾತನಾಡುವ ವ್ಯಕ್ತಿ, ಕೊಟಿಗೊಬ್ಬ ಕಾಕಾನದು.
ಇನ್ನೇನು ಆ ಮೇಲ್ ಓಪನ್ ಮಾಡಿ ನೋಡಬೇಕು ಅನ್ನುವಸ್ಟರಲ್ಲಿ ಸಬ್ಜೆಕ್ಟ್ ಕಾಣಿಸಿತು, ಅದನ್ನೂ ನೋಡಿ ಆಶ್ಚರ್ಯವಾಯಿತು, ಇದೇನು ಇವನಿಂದ ಇಂತ ಮೇಲ್ ಬಂತಲ್ಲ ಅಂತ ಪುಲ್ ಮೇಲ್ ಓದಕ್ಕೆ ಪ್ರಾರಂಬ ಮಾಡಿ ಮುಗಿಸುವಸ್ಟರಲ್ಲಿ ಅವನ ಮನಸ್ತಿತಿ ತಿಳಿದುಬಿಟ್ಟಿತು. ಇಸ್ಟೇ ಅದರ ಸಾರಾಂಶ " ನಾನು ಮತ್ತು ನೀವು ಎಲ್ಲರು ಏಕಾಂಗಿ ಆಗಿದ್ದವೇ ಎಲ್ಲರು ಕುಡಿ ಮತ್ತೆ ನೆನಪಿಸೋಣ ನಮ್ಮ ಹಿಂದಿನ ದಿನಗಳನ್ನು " , ಆದರೆ ಮೇಲ್ ಮತ್ತೆ ಇನ್ನೇನು ಮಾತನಾಡುತ್ತೆ .
ಆ ಮೇಲ್ ಓದಿ ಸ್ವರ್ಗದ ಬಾಗಿಲು ಇವರ ಮುಂದೆ ಕಾಣುವ ಹಾಗೆ " ನಾನು ಒಳಗೆ ನಾನು ಒಳಗೆ" ಅಂತ ಹೇಳಿ ಯಾವ ಜಾಗಕ್ಕೆ ಹೋದರು ಗೊತ್ತಿಲ್ಲ . ಅವರನ್ನು ಹುಡಕಿಕೊಂಡು ಕಾಕಾ ಹೋದವನು ಇನ್ನೂಬಾರದೆ ನಮ್ಮ ಗೆಳೆಯರ ಬಳಗ ಕೂಡದೆ ಮಂಗ ಮಾಯವಾಗಿದೆ .
ಕಾಕಾ , ನೀನೇನು ತಲೆ ಕೆಡಿಸಿಕೊಂಡು ವಿಚಾರ ಹೇಳಿದಾಗ ನಾ ಮುಂದೆ ನಿ ಮುಂದೆ ಅಂತ ಬಂದ ಆರಂಬಶುರರು (ಹಾಗೆ ಸುಮ್ಮನೆ )ಎಲ್ಲಿ ಹೋಗಿದ್ದಾರೆ ಅಥವಾ ನಿನೆನಾದರು ಅವರಿಗೆ ಸಹಕಾರ ಕೊಡ್ತಾ ಇಲ್ಲ ಏನೋ ?. ನೀನೇನು ಇವರನ್ನು ನಂಬಿ ಅದೆಸ್ಟೋ ಕಮಿಟೀಗಳನ್ನು ಮಾಡಿ, ಇವರಿವರು ಇದನ್ನು ಮಾಡಿ ಅಂತ ಹೇಳಿ ದನ್ಯವಾದ ಅರ್ಪಿಸಿದೆ .
ಆ ಕಮೀಟಿಗಳು ಯಾವತ್ತು ಮೇಲೆ ಏಳದೆ ಏನು ಮಾಡದೇ ಕುಂಬಕರ್ಣ ನಿದ್ರೆ ಮಾಡುತ್ತಿವೆ . ನಮ್ಮೆಲ್ಲರನ್ನೂ ಮತ್ತು ಕಮೀಟಿಗಳನ್ನೂ ಅನುಕಿಸುತ್ತ ಕೆಲವು ದಿನಗಳ ನಂತರ ಏರ್ಪೋರ್ಟ್ ರೋಡ್ನಿಂದ ಒಂದು ಮೇಲ್ ಬಂತು ಅದೇನಂದರೆ "ಕಾಕಾ ನಿನ್ನ ವಿಚಾರ ಮೇಲ್ ಬುಟ್ಟಿಗೆ ಸಿಮಿತವಾಗಬೇಕು ಏನು ?" , ಆದರೆ ನಮ್ಮವರು ಯಾರು ತಲೆ ಕೆಡಿಸಿಕೊಳ್ಳಲೇ ಇಲ್ಲ. ಇಂಥವರನ್ನು ನಂಬಿ ನೀನು ಕೆಟ್ಟು ಹೋದೆ ಕಾಕಾ.
ಏನು ಮಾಡುವದು ನಿನ್ನದೇನು ತಪ್ಪಿಲ್ಲ, ನಿನ್ನ ಟೀಂ ಇದ್ದಿದು ಹಾಗೆ ಏನು ಮಾಡಲ್ಲ ಅವರು. ಕರ್ಡ್ ರೈಸ್ ರವಿ , ಮಿಮಿಕ್ರಿ ದಯಾನಂದ್ ಕಟ್ಟಿಮನಿ , ಗ್ರಾಮ ವಾಸ್ತ್ಯವ್ದದ ತರಹ ಹಂಪಿನಗರಕ್ಕೆ ಬಂದು ಹೋಗುವ ಗೋಪಾಲ್ , ದೂರಿನಲ್ಲಿ ಇದ್ದು ಸ್ಕೀಮ್ ಹಾಕುವ ವಿನೋದ್ , ಗ್ರಾಮಗಳಲ್ಲಿ ವಿಮಾನ ಹಾರುವ ತರಹ ಆಗೊಮ್ಮೆ ಹೀಗೊಮ್ಮೆ ಒಂದು ಮೇಲ್ ಹಾಕುವ ದೀಪಕ್ , ಏನು ಗೊತ್ತಾಗದೆ ತಲೆ ಕೆಡಿಸಿಕೊಂಡಿರುವ ದಾನಗೌಡ, ಎಲ್ಲದಕ್ಕೂ ಕೊಂಹಿ ಕೊಂಹಿ ಅನ್ನುವ ಅಲಾಸೆ ಮತ್ತು ಈಗ ತಾನೆ ಲಗ್ನ ಹಾಗಿ ಹಾಯಾಗಿರುವ ಶಂಕರ್ ಹಾಗು ಏನು ಮಾತನಾಡದೆ ಇರುವ ಚಿಕ್ಕುರ್ , ಇವರನ್ನು ಹೇಗೆ ನಂಬಿದೆ ಶಿವ ನೀನು!!!!
ಕೊನೆಗೆ ಇದನೆಲ್ಲ ತಿಳಿದು ನನ್ನಿಂದ ಏನು ಮಾಡಲಿಕ್ಕೆ ಆಗಲಿಲ್ಲ ಅಂತ, ಮೊನ್ನೆ ಯಡಿಯೂರಪ್ಪ ಕಣ್ಣಿರು ಹಾಕಿದರಲ್ಲ ಇದೆ ಕಾರಣ ಹೇಳಿ , ಆ ತರಹ ಕಣ್ಣಿರು ಹಾಕಬೇಡ . ಕಣ್ಣಿರು ಹಾಕುವದು ನಾಯಕನಿಗೆ ಶೋಬೆಯಲ್ಲ .
ನಿನ್ನ ಗುರಿ ಮುಂದೆ ಸಾಗಲಿ, ದೇವೇಗೌಡರ್ ನೈಸ್ ರಸ್ತೆ ಹೋರಾಟದ ತರಹ. ಎಲ್ಲರಿಗು ಅದೇ ಕುತೂಹಲ ನೀನು ಮೊದಲು ಅಥವಾ ದೇವೇಗೌಡ.